Friday, September 2, 2016

ತಪ್ಪು

ಮಾಡಿದ ತಪ್ಪನ್ನು ಒಪ್ಪು
ಒಪ್ಪಿದ ತಪ್ಪಿಗೆ ಮರುಕದಿರು
ಮರುಗಿದ ತಪ್ಪನ್ನು ತಿದ್ದು
ತಿದ್ದಿದ ತಪ್ಪನ್ನು ಮರುಕಳಿಸದಿರು

ತಪ್ಪು ಮಾಡುವುದು ಸಹಜ
ತಿದ್ದಿ ನಡೆಯುವುದೇ ಮನುಜ
ಇದನ್ನು ತಿಳಿಯೋ ಅನುಜ
ತಿಳಿದರೆ ಅದರಲ್ಲಿದೆ ಮಜ

ಒಂದು ಬಾರಿಯ ತಪ್ಪು ತಪ್ಪಲ್ಲ
ಬಾರಿ ಬಾರಿ ತಪ್ಪಿಗೆ ಒಪ್ಪಿಲ್ಲ
ತಪ್ಪುಗಳಿಲ್ಲದೇ ಮುಪ್ಪಿಲ್ಲ
ತಪ್ಪುಗಳಿಂದಲೇ ಕಲಿಕೆಯೆಲ್ಲ

ತಪ್ಪುಗಳ ತಪ್ಪಲನಲ್ಲಿ ಇರದಿರು
ಅವುಗಳನು ಎದುರಿಸದೇ ಹೆದರದಿರು
ತಪ್ಪುಗಳಿಂದಲೇ ಸಾಗಿಸು ಜೀವನ
ಅವುಗಳ ಕಲಿಕೆಯಿಂದಲೇ ಹಾಡು ಜಯದ ಕವನ

ಆಡು ಮುಟ್ಟದ ಸೊಪ್ಪಿಲ್ಲ
ತಪ್ಪು ಮಾಡದ ಮನುಜನಿಲ್ಲ

Sunday, August 28, 2016

ಜೀವನ

ಜೀವನ ಒಂದು ನಗು-ಅಳುವಿನ ಇಂಚರ
ಸುಖ ದು:ಖಗಳ ಸಂಚಾರ

ತಿಳಿದರೂ ಅರಿಯಲಾಗದ
ಅರಿತರೂ ಕಾಣಲಾರದ
ಕಂಡರೂ ಅನುಭವಿಸಲಾರದ
ಅನುಭವಿಸಿದರೂ ಆನಂದಿಸಲಾರದ
ಆನಂದಿಸಿದರೂ ತೃಪ್ತಿ ಇರದ
ಇಡೇರದ ಕನಸುಗಳ ಪಯೋದ

ಬದಲಾಯಿತು ಬಾಳುವ ನೀತಿ
ಗೊತ್ತಾಗದ ಏನಿದು ರೀತಿ
ಇರದಾಯಿತು ನಮಗೊಂದು ಶಾಂತಿ
ಮನೆ ಮಾಡಿತು ಭವಿಷ್ಯದ ಭೀತಿ
ಹಾರಿಹೋಯಿತು ಪರಸ್ಪರ ಪ್ರೀತಿ
ಏನಿದು ಕಲಿಯುಗದ ಜೀವನ ಕೃತಿ

ಸಂಕಲ್ಪವಿರದ ಮನಸ್ಸಿನ ಚಂಚಲ
ಸಾಕು ಎನ್ನದೇ ಬೇಕು ಎನ್ನುವ ಹಂಬಲ
ತೋರಬೇಕೆನ್ನುವ ಹಣದ ಬಲಾಬಲ
ಒಳ್ಳೆಯತನವಾಯ್ತು ಅಂಗುಲ
ಇಲ್ಲದಾಯಿತು ಬೇರೆಯವರ ಬೆಂಬಲ
ಅರ್ಥವಿಲ್ಲದ ಮಾನವನ ಸಂಕುಲ

ಜೀವನ ಒಂದು ನಗು-ಅಳುವಿನ ಇಂಚರ
ಸುಖ ದು:ಖಗಳ ಸಂಚಾರ

Wednesday, August 24, 2016

ಮೊದಲ ನೋಟ

Bgm: Cheap Thrills - Veena Cover
Audio Song: Click Here (Excuse me for singing)


ನಿನ್ನ ಕಂಡ ಆ ಕ್ಷಣದಿಂದ ನನ್ನ ಒಳಗೆ ನಾನಿಲ್ಲ
ನಿನ್ನೆ ಮೊನ್ನೆಯ ಜಗವೆಲ್ಲ ಬದಲಾಗಿದೆ ಎಲ್ಲ
ನೋಡುತಿರುವ ನೋಟವೆಲ್ಲ ನೀನೇ ಎಂದು ಅನಿಸಿದೆ
ಕಾಣುತಿರುವ ಕನಸಲೆಲ್ಲ ನೀನೇ ಬಂದು ಕಾಡುವೆ

ಇದು ಏನು ಇದು ಯಾಕೆ ಎಂಬ ಪ್ರಶ್ನೇಯು ಮೂಡಿದೆ
ಅದು ಪ್ರೀತಿ ಅದು ಹಾಗೇಯೇ ಎಂಬ ಉತ್ತರ ಸಿಕ್ಕಿದೆ

ನಿನ್ನ ಒಂದು ಮಾತು, ಸಾಕು
ನಿನ್ನ ಒಂದು ನೋಟ, ಬೇಕು
ನಿನ್ನ ಒಂದು ಮಾತು, ಸಾಕು
ನಿನ್ನ ಒಂದು ನೋಟ, ಬೇಕು

ನಿನ್ನ ಕಂಡ ಆ ಕ್ಷಣದಿಂದ ನನ್ನ ಒಳಗೆ ನಾನಿಲ್ಲ
ನಿನ್ನೆ ಮೊನ್ನೆಯ ಜಗವೆಲ್ಲ ಬದಲಾಗಿದೆ ಎಲ್ಲ
ನೋಡುತಿರುವ ನೋಟವೆಲ್ಲ ನೀನೇ ಎಂದು ಅನಿಸಿದೆ
ಕಾಣುತಿರುವ ಕನಸಲೆಲ್ಲ ನೀನೇ ಬಂದು ಕಾಡುವೆ

ಇದು ಏನು ಇದು ಯಾಕೆ ಎಂಬ ಪ್ರಶ್ನೇಯು ಮೂಡಿದೆ
ಅದು ಪ್ರೀತಿ ಅದು ಹಾಗೇಯೇ ಎಂಬ ಉತ್ತರ ಸಿಕ್ಕಿದೆ

ನಿನ್ನ ಒಂದು ಮಾತು, ಸಾಕು
ನಿನ್ನ ಒಂದು ನೋಟ, ಬೇಕು
ನಿನ್ನ ಒಂದು ಮಾತು, ಸಾಕು
ಇನ್ನು ನನಗೆ ನೀನೇ ಬೇಕು

Monday, August 8, 2016

ನಾನು ನೀನು

(Kannada version of  "taanu nenu" from Saahasam Swaasaga Saagipo)

ನಾನು ನೀನು ಬೇರೆ ಏನು
ನಾನು ನೀನು ಜೋಡಿ ಕಣ್ಣು
ನಾನು ನೀನು ಹಾಲು ಜೇನು
ನಾನು ನೀನು ಹೊನ್ನು ಮಣ್ಣು
ನದಿ ನೀನಂತೆ ಕಡಲು ನಾನು
ಹೂವು ಕುಸುಮ ನಾನು ನೀನು
ಸೂರ್ಯನ ಬೆಳಕು ನಿನ್ನಯ ಹೊಳಪು
ನಾನು ನೀನು ತಾನು ಬಾನು

ದಾರಿ ನಾನು ದೀಪ ನೀನು
ದಾರ ನಾನು ಹಾರ ನೀನು
ದಾಹ ನಾನು ನೀರು ನೀನು
ಕಾವ್ಯ ನಾನು ಸಾರ ನೀನು
ನಾನು ನೀನು ರೆಪ್ಪೆ ಕಣ್ಣು
ಜೊತೆಗೆ ಇರುವೆ ಸೇರಿದರೆ ಮಣ್ಣು
ನಾನು ನೀನು ರೆಪ್ಪೆ ಕಣ್ಣು
ಜೊತೆಗೆ ಇರುವೆ ಸೇರಿದರೆ ಮಣ್ಣು

ನಾನು ನೀನು ಬೇರೆ ಏನು
ನಾನು ನೀನು ಜೋಡಿ ಕಣ್ಣು
ನಾನು ನೀನು ಒಂದೇ ಉಸಿರು
ನಾನು ನೀನು ಒಂದೇ ನೆರಳು

ನಾನು ನೀನು ಬೇರೆ ಏನು
ನಾನು ನೀನು ಜೋಡಿ ಕಣ್ಣು
ನಾನು ನೀನು ಹಾಲು ಜೇನು
ನಾನು ನೀನು ಹೊನ್ನು ಮಣ್ಣು
ನದಿ ನೀನಂತೆ ಕಡಲು ನಾನು
ಹೂವು ಕುಸುಮ ನಾನು ನೀನು
ಸೂರ್ಯನ ಬೆಳಕು ನಿನ್ನಯ ಹೊಳಪು
ನಾನು ನೀನು ತಾನು ಬಾನು
ತಾನು ಬಾನು ತಾನು ಬಾನು ತಾನು ಬಾನು...

Sunday, June 12, 2016

ತಿರುಗಿ ಬರುವೆಯಾ?

ಕೋಳಿ ಕೂಗುವುದು ನಿಂತಿದೆ
ಸೂರ್ಯನ ಉದಯ ಇಲ್ಲವಾಗಿದೆ
ಚಂದ್ರನ ಬೆಳಕು ಮರೆಯಾಗಿದೆ
ನೀನಿಲ್ಲದೆ ಏನೂ ಇಲ್ಲವಾಗಿದೆ, ತಿರುಗಿ ಬರುವೆಯಾ?

ಹೋಗುವ ದಾರಿಯ ಚಿಕ್ಕದಾಗಿದೆ

ನಾವು ಬಯಸಿದ ವಾಹನ ನಿಂತಿದೆ
ನೀ ಬಯಸಿದ ಸ್ಥಳ ದೂರವಾಗಿದೆ
ನೀನಿಲ್ಲದೆ ಎಲ್ಲವೂ ನಿಂತಿದೆ, ತಿರುಗಿ ಬರುವೆಯಾ?

ನಿನ್ನ ನೆಚ್ಚಿನ ಉಪಹಾರ ಅಪರೂಪವಾಗಿದೆ

ನನ್ನ ಆಹಾರ ದಿನೆ-ದಿನೆ ಕಡಿತವಾಗಿದೆ
ನೀನಿಲ್ಲದ ಕ್ಷಣ ಬೇಡವಾಗಿದೆ
ನೀನಿಲ್ಲದೆ ಎಲ್ಲವೂ ಶೂನ್ಯವಾಗಿದೆ, ತಿರುಗಿ ಬರುವೆಯಾ?

ನಾವು ನೆಟ್ಟ ಗಿಡವೀಗ ಮರವಾಗಿದೆ

ನಾವು ಕಟ್ಟಿದ ಕಲ್ಲಿನ ಮನೆ ಹಾಗಿಯೇ ಇದೆ
ನಾವು ಕಂಡ ಕನಸಿನ್ನು ಕನಸಾಗಿಯೇ ಇದೆ
ನೀನಿಲ್ಲದೆ ಎಲ್ಲವೂ ಶಾಂತವಾಗಿದೆ, ತಿರುಗಿ ಬರುವೆಯಾ?

ನೀನಿಲ್ಲದೆ ಈ ಮಳೆ ಬೇಡವಾಗಿದೆ

ನೀನಿಲ್ಲದೆ ಈ ತಂಗಾಳಿ ಇಷ್ಟವಾಗದಾಗಿದೆ
ನೀನಿಲ್ಲದೆ ಈ ಸಂಜೆ ಕಷ್ಟವಾಗಿದೆ
ನೀನಿಲ್ಲದೆ ಶಾಂತಿಯು ಇಲ್ಲದಾಗಿದೆ, ತಿರುಗಿ ಬರುವೆಯಾ?

ನೀ ಬಯಸಿದ ಬಳೆಗಳೀಗ ಸದ್ದು ಮಾಡದಾಗಿವೆ

ನೀ ಬಯಸಿದ ಓಲೆಗಳೀಗ ಅಲುಗಾಡದಾಗಿವೆ
ನೀ ಬಯಸಿದ ಸರದ ಮುತ್ತುಗಳು ಹೊಳಪಿಲ್ಲದಾಗಿವೆ
ನೀನಿಲ್ಲದೆ ಜಾತ್ರೆಯು ಮುಗಿದಂತಾಗಿದೆ, ತಿರುಗಿ ಬರುವೆಯಾ?

ಪ್ರತೀ ದೂರವಾಣಿ ಕರೆಯು ನಿನ್ನದೆಂದು ಮನ ಬಯಸುತಿದೆ

ಪ್ರತೀ ಚುಟುಕು ಸಂದೇಶ ನಿನ್ನದಾಗಿರಲು ಮನ ಹವಣಿಸುತಿದೆ
ಪ್ರತೀ ಕಣ ನಿನ್ನನ್ನು ಜಪಿಸುತಿದೆ
ನೀನಿಲ್ಲದೆ ಜೀವನ ವನವಾಸವಾಗಿದೆ, ತಿರುಗಿ ಬರುವೆಯಾ?

ನೀನಿಲ್ಲದ ಕನಸು, ಕಣ್ಣುಗಳೀಗ ಬೇಡವಾಗಿದೆ

ಹುಣ್ಣಿಮೆ ಚಂದಿರನಿಲ್ಲದೆ ಸಾಗರವೀಗ ಶಾಂತವಾಗಿದೆ
ಸಾಗರ ಸೇರುವ ನದಿಗಳೀಗ ನಿಂತಂತಾಗಿವೆ
ನೀನಿಲ್ಲದೆ ಎಲ್ಲವೂ ಮರುಭೂಮಿಯಾಗಿದೆ, ತಿರುಗಿ ಬರುವೆಯಾ?

ನೀನಿಲ್ಲದೆ ನನ್ನ ಉಸಿರು ಇಲ್ಲವಾಗಿದೆ

ನೀನಿಲ್ಲದೆ ನನ್ನ ಜೀವನ ಮುಗಿದಂತಾಗಿದೆ
ನೀನಿಲ್ಲದೆ ನನ್ನ ಜೀವನ ಸೆರೆವಾಸವಾಗಿದೆ
ನೀನಿಲ್ಲದೆ ನಗುವೆಲ್ಲ ಅಳುವಾಗಿದೆ, ತಿರುಗಿ ಬರುವೆಯಾ?

ಸಮಯವ ಹಿಡಿದಿರುವೆ, ತಿರುಗಿ ಬಾ!

ನಿನಗಾಗಿ ಕಾಯುತ್ತಿರುವೆ, ತಿರುಗಿ ಬಾ!!

ಸಾವು ಸೂತಕ

ಏನಿದು ಸೂತಕದ ಛಾಯೆ
ಎಲ್ಲವೂ ದೇವರ ಮಾಯೆ
ಬಿತ್ತೊಂದು ಕೊರಳಿಗೆ ಮಾಲೆ
ಇದೆಲ್ಲ ಅವನಾಡುವ ಲೀಲೆ

ಹೇಳು ನೀ ಅವರಿಗೆ ಧೈರ್ಯ
ತುಂಬು ನೀ ಅವರ ಆತ್ಮ ಸ್ತೈರ್ಯ
ಅವರೊಡನೆ ನಾಲ್ಕಾರು ಮಾತು ಸಂಭಾಷಿಸು
ಆ ಮಾತುಗಳಿಂದ ಅವರನ್ನು ಸಂತೈಸು

ಮನೆಯಲ್ಲಿ ಖುಷಿಯ ನಗೆ ಬೇಡ
ಎಲ್ಲಿಯೂ ಸೂತಕದ ಅಳು ಬೇಡ
ಮನೆಮಂದಿಯೆಲ್ಲ ಮೂಕರಾದರು
ಮೂಕರ ಮೌನವೇ ಮಾತುಗಳಾದವು

ಏನಿದು ದೇವರ ಕೊಟ್ಟ ಶಿಕ್ಷೆ
ಮುಗಿಯತೇ ಅವನು ಕೊಟ್ಟ ಭಿಕ್ಷೆ
ಹಾರಿ ಹೋಯಿತು ಪ್ರಾಣ
ಅದು ಸೇರಿತು ಕಾನನ

ಏನಿದು ಸೂತಕದ ಛಾಯೆ
ಎಲ್ಲವೂ ದೇವರ ಮಾಯೆ

Friday, May 27, 2016

ಮನಸ್ಸು


ಮನುಷ್ಯನಿಗೊಂದು ಒಂದು ಮನಸ್ಸು
ಮನಸ್ಸಿನೊಳಗೊಂದು ಒಳ ಮನಸ್ಸು
ಈ ಒಳ ಮನಸ್ಸಿನಲ್ಲಿ ಯಾರ ಮನಸ್ಸು?

ಸೂರ್ಯನ ಕಿರಣ ಬಯಸುವ ತಾವರೆಯ ಮನಸ್ಸು
ದುಂಬಿಯ ಕ್ಷಣ ಪರಿತಪಿಸುವ ಹೂವಿನ ಮನಸ್ಸು
ಈ ಮನಸ್ಸಿಗೂ ಬೇಡವೇ ಒಂದು ಮನಸ್ಸು?

ಅಲೆಗಳಿಗೆ ದಡ ಸೇರುವ ಮನಸ್ಸು
ಚಂದಿರನಿಗೆ ಬೆಳಕು ಬೀರುವ ಮನಸ್ಸು
ನನ್ನ ಮನಸ್ಸಿಗೂ ಮಾಡಬಾರದೇ ಯಾರಾದರೂ ಮನಸ್ಸು?

ಹಕ್ಕಿಗೆ ಹಾರುವ ಮನಸ್ಸು
ಮೀನಿಗೆ ಈಜುವ ಮನಸ್ಸು
ನಾನೂ ಹುಡುಕಬಹುದಾ ಒಂದು ಮನಸ್ಸು?

ನಿನ್ನ ನೋಡಲು ಬಯಸುವ ಈ ಮನಸ್ಸು
ಮಾತನಾಡಿಸುವ ಆಸೆ ಹೊತ್ತಿರುವ ನನ್ನೀ ಮನಸ್ಸು
ಯಾಕೆ ಈ ಮನಸ್ಸಿನ ಜೊತೆ ವೈಮನಸ್ಸು?

ಮನುಷ್ಯನಿಗೊಂದು ಒಂದು ಮನಸ್ಸು
ಮನಸ್ಸಿನೊಳಗೊಂದು ಒಳ ಮನಸ್ಸು
ಈ ಒಳ ಮನಸ್ಸಿನಲ್ಲಿ ಬರೀ ಕನಸಿನ ಮನಸ್ಸು!!