Sunday, September 6, 2015

ಕಲಾವಿದ


ಅವನೊಬ್ಬ ಅದ್ಭುತ ಕಲಾವಿದ
ನನಗೆ ನಿನ್ನನ್ನೇ ಸೃಷ್ಟಿಸಿದ

ಏನವನ ಸುಂದರ ಕಲೆ
ಮೆಚ್ಚಲೇಬೇಕು ಆಹಾ! ಭಲೇ ಭಲೇ
ಇರಿಸಿದ ಅವಳಲ್ಲಿ ಸೆಳೆತದ ಅಲೆ
ಬಾಗಿಸುವೆನು ನಿನಗೆನ್ನ ತಲೆ

ಪರಿಚಯವಾಗಲೀಗ ಅಬ್ಧುತ ಸಮಯ
ನನಗಿದು ಹೊಸತು ಅವಳ ವಿನಯ
ಅವಳ ನೆನಪಿನಲಿ ನಾನೀಗ ತನ್ಮಯ
ಗೊತ್ತಾಗದೇ ಶುರುವಾಯ್ತು ಪ್ರಣಯ

ಜಾಹೀರಾಗಲಿ ಈ ಪ್ರೀತಿಯ ಸುದ್ದಿ
ಅವಳಲ್ಲಿಯೇ ಕಳೆದೋಯ್ತು ನನ್ನಯ ತುಸು ಬುದ್ಧಿ
ಅವಳ ಮನಸ್ಸೊಂದು ಸುಂದರ ಶುದ್ಧಿ
ಪ್ರೀತಿ ಪಡೆಯಲು ಮಾಡಿರುವೆ ಜಿದ್ದಿ

ನಮ್ಮಿಬ್ಬರ ಈ ವಿನೊತನ ಹಾದಿ
ಆಗಲಿ ಈ ಘಳಿಗೆಯಿಂದ ಆದಿ
ಊರಲ್ಲಿರುವ ಒಂದೊಂದು ಬೀದಿ,
ಹೊಗಳಲಿ ನಮ್ಮ ಪ್ರಿತೀ ಕವನವ ಓದಿ

ಅವನೊಬ್ಬ ಅದ್ಭುತ ಕಲಾವಿದ,
ಅವನೊಬ್ಬ ಅದ್ಭುತ ಕಲಾವಿದ
ನನಗೆ ನಿನ್ನನ್ನೇ ಸೃಷ್ಟಿಸಿದ