Friday, June 19, 2015

ಪ್ರೀತಿ ಎಂದರೆ ಇದೇನಾ?



ಸಾಗಿದ ದಾರಿಯ ಕಳೆದು
ಸಾಗುವ ದೂರವ ಮರೆತು
ವರ್ತಮಾನದಲ್ಲಿ ಸಮಯ ನಿಂತಿರಲು
ಪ್ರೀತಿ ಎಂದರೆ ಇದೇನಾ? ಪ್ರೀತಿ ಎಂದರೆ ಇದೇನಾ?

ಪ್ರತೀ ಕ್ಷಣವು ನೆನೆದು
ಪ್ರತೀ ಸಲವು ಜಗ ಮರೆತು
ಮುಗಿಲು ಕರಗಿ ಹನಿಯೊಂದು ಬಂದಿರಲು
ಪ್ರೀತಿ ಎಂದರೆ ಇದೇನಾ? ಪ್ರೀತಿ ಎಂದರೆ ಇದೇನಾ?

ಅವಳನು ನೋಡಿದ ಸಮಯ
ತುಸು ತಾಳ ತಪ್ಪಿತು ಹೃದಯ
ಬೇರೆ ಎಲ್ಲವು ಸ್ತಬ್ಧವಾಗಿರಲು
ಪ್ರೀತಿ ಎಂದರೆ ಇದೇನಾ? ಪ್ರೀತಿ ಎಂದರೆ ಇದೇನಾ?

ಎದುರು ನೋಡುತಿರಲು ಅವಳದೇ ಸಂದೇಶ
ಎನ್ನೋಳಗೇ ಏನೋ ಒಂದು ಭಾವ ವಿಶೇಷ
ನಿತ್ಯ-ದಿನನಿತ್ಯದಾಟ ನಡೆದಿರಲು
ಪ್ರೀತಿ ಎಂದರೆ ಇದೇನಾ? ಪ್ರೀತಿ ಎಂದರೆ ಇದೇನಾ?

ಅವಳೊಡನೆಯ ಗತಕಾಲವೀಗ ನಿಮಿಷ
ಸನಿಹದಲ್ಲಿರುವಾಗ ಬೇರೆ ಎಲ್ಲವೂ ನಿಶ್ಯೇಷ
ಜೀವನವೀಗ ಹೊಸ ಅರ್ಥ ಪಡೆಯುತಿರಲು
ಪ್ರೀತಿ ಎಂದರೆ ಇದೇನಾ? ಪ್ರೀತಿ ಎಂದರೆ ಇದೇನಾ?