ಏನಿದು ಭಗವಂತ ಈ ಜೀವನ?
ಇದು ಸಿಹಿ-ಕಹಿಗಳ ಕವನ ಹಾಗೂ ಕದನ
ಸಮುದ್ರವೊಂದು ಹರಿದರೆ ನದೀಯಾದಿತು
ನದಿಯೊಂದು ನಿಂತರೆ ಸಮುದ್ರವಾದೀತೆ?
ಈ ಸಮುದ್ರದ ತೀರವೊಂದು ಉದ್ದವಾಗಿದೆ
ತೀರದ ಉದ್ದವು ಕಡಿಮೆಯಾದೀತೆ?
ಸಸಿಯೊಂದು ಬೆಳೆದು ಗಿಡವಾದೀತು
ಗಿಡವೊಂದು ಮುರಿದು ಸಸಿಯಾದೀತೆ?
ಸಮಯವು ಕಳೆದು ಮುಂದೆ ಹೋದೀತು
ಹೋದ ಸಮಯ ತಿರುಗಿ ಬಂದೀತೆ?
ಆಗುವುದು ಲವಣಗಳಿಂದ ಮುತ್ತೊಂದು
ಒಡೆದು ಹೋದ ಮುತ್ತು ತಿರುಗಿ ಬಂದೀತೆ?
ಹೊರಳಾಡುವುದು ಎಲುಬಿಲ್ಲದ ನಾಲಿಗೆಯು
ಆಡಿದ ಮಾತು ವಾಪಸ್ಸಾದೀತೆ?
ಮೊಗ್ಗಂದು ಅರಳಿ ಹೂವಾದೀತು
ಹೂವೊಂದು ಮರಳಿ ಮೊಗ್ಗಾದೀತೆ?
ಮಿಂಚೊಂದು ಧರೆಗಿಳಿದು ಬಂದಂತೆ
ತಿರುಗಿ, ಅದು ಮೇಲೆ ಚಲಿಸೀತೆ?
ಇದು ಮೇಲಿನವನ ಆಟದ ಬಣ್ಣ
ಇದು ಸಿಹಿ-ಕಹಿಗಳ ಕವನ ಹಾಗೂ ಕದನ
No comments:
Post a Comment